ಬಾಗಲಕೋಟೆಯಲ್ಲಿ ಶ್ರೀರಾಮಸೇನೆಯಿಂದ 186 ಕಾರ್ಯಕರ್ತರಿಗೆ ಗನ್ ತರಬೇತಿ

0 0
Read Time:3 Minute, 17 Second

ಶ್ರೀರಾಮಸೇನೆಯಿಂದ ಕಾರ್ಯಕರ್ತರಿಗೆ ಗನ್ ಟ್ರೈನಿಂಗ್ ನೀಡಲಾಗಿದೆ. ಗನ್ ಜೊತೆಗೆ ವಿವಿಧ ಕಠಿಣ ತರಬೇತಿ ಕೂಡ ನೀಡಲಾಗಿದೆ. ರಾಜ್ಯದ 186 ಯುವಕರಿಗೆ ಗನ್ ಟ್ರೈನಿಂಗ್ ನೀಡಲಾಗಿದ್ದು, ಈ ಬಗ್ಗೆ ಶ್ರೀರಾಮ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಸ್ಪಷ್ಟನೆ ನೀಡಿದ್ದಾರೆ. ಅದು ಸ್ವರಕ್ಷಣೆಗಾಗಿ ನೀಡಲಾದ ಏರ್ಗನ್ ಟ್ರೈನಿಂಗ್ ಎಂದು ಅವರು ತಿಳಿಸಿದ್ದಾರೆ.

Gun Training

ಧಾರವಾಡ: ತನ್ನ ಕಾರ್ಯಕರ್ತರಿಗೆ ಗನ್ ತರಬೇತಿಯನ್ನು ಶ್ರೀರಾಮ ಸೇನೆ ನೀಡಿದೆ. 186 ಯುವಕರಿಗೆ ಶ್ರೀರಾಮ ಸೇನೆಯಿಂದ ಗನ್ ಟ್ರೈನಿಂಗ್ ನೀಡಲಾಗಿದೆ. ಶ್ರೀರಾಮ ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ನೇತೃತ್ವದಲ್ಲಿ ಈ ತರಬೇತಿ ನಡೆದಿದೆ. ಈ ಗನ್ ತರಬೇತಿ ಕುರಿತು ಗಂಗಾಧರ ಕುಲಕರ್ಣಿ ಸ್ಪಷ್ಟನೆ ನೀಡಿದ್ದು, ಏರ್‌ಗನ್ ಮೂಲಕ ಸ್ವರಕ್ಷಣೆ ತರಬೇತಿ ನೀಡಿದ್ದೇವೆ. ಪ್ರತಿವರ್ಷ ಆಯ್ದ ಕಾರ್ಯಕರ್ತರಿಗೆ ತರಬೇತಿ ನೀಡಲಾಗುತ್ತದೆ ಎಂದಿದ್ದಾರೆ.

6 ದಿನಗಳ ತರಬೇತಿ ಕ್ಯಾಂಪ್ ಇದಾಗಿದೆ. ದಂಡ, ತಲ್ವಾರ್, ಕರಾಟೆ, ಆಪ್ಟಿಕಲ್ಸ್, ಏರಗನ್ ತರಬೇತಿ ನೀಡಲಾಗಿದೆ. ಹಿಂದೂ ಕಾರ್ಯಕರ್ತರ ಮೇಲೆ ದಾಳಿಯಾಗುತ್ತಿದೆ. ಅದಕ್ಕೆ ತಕ್ಕ ಉತ್ತರ ಕೊಡಲು ಈ ತರಬೇತಿ ಕ್ಯಾಂಪ್ ಆಯೋಜಿಸಲಾಗಿದೆ. ಈ ವರ್ಷದ ಕ್ಯಾಂಪ್ ಅತ್ಯಂತ ಯಶಸ್ವಿಯಾಗಿದೆ ಎಂದು ಧಾರವಾಡ ನಗರದಲ್ಲಿ ಗಂಗಾಧರ ಕುಲಕರ್ಣಿ ಹೇಳಿದ್ದಾರೆ.

ಮುಂದಿನ ಸವಾಲು ಎದುರಿಸಲು ಯುವಕರನ್ನು ಸಜ್ಜು ಮಾಡಿದ್ದೇವೆ. ಹಿಂದೆ ಗದಗ, ಹಾವೇರಿ, ಸಾಗರದಲ್ಲಿಯೂ ತರಬೇತಿ ನೀಡಲಾಗಿತ್ತು. ಈ ಸಲ ಬಾಗಲಕೋಟೆಯಲ್ಲಿ ತರಬೇತಿ ನೀಡಲಾಗಿದೆ. ಇಡೀ ರಾಜ್ಯದಿಂದ ಪ್ರಶಿಕ್ಷಾರ್ಥಿಗಳು ಬಂದಿದ್ದರು. ತಾವು ಕಲಿತಿದ್ದನ್ನು ಅವರೆಲ್ಲ ತಮ್ಮ ಜಿಲ್ಲೆಯಲ್ಲಿ ಕಲಿಸುತ್ತಾರೆ ಎಂದು ಹೇಳಿದ್ದಾರೆ.

ಹಾಗೇ, ಶ್ರೀರಾಮಸೇನೆಯಿಂದ ಯುವಕರಿಗೆ ವ್ಯಕ್ತಿತ್ವ ವಿಕಸನ ಅಭ್ಯಾಸ ವರ್ಗ ತರಬೇತಿ ನೀಡಲಾಗಿದೆ. ಸೇನಾ ತರಬೇತಿ ಮಾದರಿಯಲ್ಲಿ ಯುವಕರಿಗೆ ತರಬೇತಿ ನೀಡಲಾಗಿದೆ. ದಂಡ ಪ್ರಯೋಗ, ನಕಲಿ ಗನ್ ಮೂಲಕ ಗನ್ ಟ್ರೈನಿಂಗ್, ಕರಾಟೆ ಸೇರಿದಂತೆ ವಿವಿಧ ಕೌಶಲ್ಯ ತರಬೇತಿ ನೀಡಲಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ 6 ದಿನಗಳ ಕಾಲ ಶಿಬಿರ ನಡೆದಿದೆ. ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದ ಗುಡ್ಡದಲ್ಲಿ ತರಬೇತಿ ಶಿಬಿರ ನಡೆಸಲಾಗಿದೆ. ವ್ಯಕ್ತಿತ್ವ ವಿಕಸನ ಹಾಗೂ ಸ್ವಸುರಕ್ಷಾ ಶಾರೀರಿಕ ತರಬೇತಿ ನೀಡಲಾಗಿದೆ.

ಸ್ವಸುರಕ್ಷೆಗಾಗಿ ವಿವಿಧ ರಕ್ಷಾ ತರಬೇತಿ ನೀಡಲಾಗಿದೆ. ಮುಳ್ಳು ಕಂಟಿಯ ಗುಂಡಿಯಲ್ಲಿ ಹಾದುಹೋಗುವುದು, ಸಂಧಿಗ್ದ ಸ್ಥಳಗಳಲ್ಲಿ ಪಾರಾಗುವುದು, ಬಂದೂಕು ಬಳಕೆ, ಟಾರ್ಗೆಟ್ ಸೆಟ್ ಮಾಡಿ ಗುರಿ ಇಟ್ಟು ಹೊಡೆಯುವ ತರಬೇತಿಯನ್ನೂ ನೀಡಲಾಗಿದೆ.

About Post Author

Karna News

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Comment